ಶ್ರೀ ಜಗದ್ಗುರು ಶಂಕರಾಚಾರ್ಯರ ಜಯಂತ್ಯುತ್ಸವ ಪ್ರಯುಕ್ತ ಸಂಪ್ರದಾಯದಂತೆ ವೈಶಾಖ ಶುಕ್ಲ ದಶಮಿಯಿಂದ ವೈಶಾಖ ಶುಕ್ಲ ಹುಣ್ಣಿಮೆಯವರೆಗೆ (ದಿನಾಂಕ 16-5-16 ರಿಂದ 21-5-16ರ ತನಕ) ವಿಶೇಷ ಕಾರ್ಯಕ್ರಮಗಳು ನಡೆದವು. ಶ್ರೀಶಂಕರ ಸೇವಾ ಸಂಘದ ವತಿಯಿಂದ ಉತ್ಸವದ ನಿಮಿತ್ತ ಸೌಂದರ್ಯಲಹರಿ ಪಠಣ, ಉಪನ್ಯಾಸ, ರುದ್ರಸ್ವಾಹಾಕಾರ ಹೋಮ, ಶ್ರೀ ಶಂಕರಾಚಾರ್ಯ ವಿರಚಿತ ಸ್ತೋತ್ರಗಳ ಕಂಠಪಾಠ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶ್ರೀ ಶಂಕರಾಚಾರ್ಯರ ಚರಿತ್ರೆ, ತತ್ವಜ್ಞಾನ ಮತ್ತು ಪ್ರಸ್ಥಾನತ್ರಯಗಳ ಕುರಿತು ಶ್ರೀಶ್ರೀಶ್ರೀ ದತ್ತಾವಧೂತರು, ಹೆಬ್ಬಳಿ, ಹಾಗು ಡಾ॥ ಪಾವಗಡ ಪ್ರಕಾಶರಾವ್ ಇವರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಹಲವಾರು ಸಂಘ ಮತ್ತು ವಿಪ್ರ ಬಾಂಧವರ ಸಹಯೋಗದೊಂದಿಗೆ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು.