॥ ಓಂ ಕೇವಲ ॥
ಆತ್ಮೀಯ ಗುರುಭಕ್ತರೆ,
ದಿನಾಂಕ ೨೩, ಮೇ, ಬುಧವಾರದಂದು, ಶ್ರೀ ಮಠದಲ್ಲಿ ಯಾಗಶಾಲೆಯ ಉಧ್ಘಾಟನೆಯನ್ನು ಮಾಡಲಾಯಿತು. ಋತ್ವಿಜರಿಂದ ರಾಕ್ಷೋಘ್ನ ಹೋಮ ಮತ್ತು ವಾಸ್ತು ಶಾಂತಿ ಹೋಮಗಳನ್ನು ನೆರವೇರಿಸಲಾಯಿತು.
ಶ್ರೀ ಮಠದಲ್ಲಿ, ಮೇ ೨೦ ರಿಂದ ಮೇ ೨೪ ರ ವರೆಗೆ, ಶ್ರೀ ಶಂಕರಾಚಾರ್ಯರ ಜಯಂತಿಯ ಪ್ರಯುಕ್ತ ಉಪನ್ಯಾಸ, ಹರಿಕಥೆ, ಪ್ರಬಂಧ ಸ್ಪರ್ಧೆ, ಶ್ಲೋಕ ಪಠಣ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದಿನಾಂಕ ೨೫, ಶನಿವಾರ ರಂದು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಶ್ರಧ್ಧೆಯಿಂದ ಆಚರಿಸಲಾಯಿತು. ಅಸಂಖ್ಯ ಆಸ್ತಿಕ ಭಕ್ತರು ಉತ್ಸವದಲ್ಲಿ ಭಾಗವಹಿಸಿದರು.
ಯಾಗಶಾಲೆಯ ಮುಂಭಾಗದ ನೋಟವನ್ನು ಅಟ್ಯಾಚಮೆಂಟನಲ್ಲಿ ಕಾಣಬಹುದು.
ಶುಭ ಹಾರೈಕೆಗಳೊಂದಿಗೆ,
ಕಾರ್ಯದರ್ಶಿ,
ಸ್ವಾಮಿ ಶ್ರೀ ಶಿವಾನಂದ ತೀರ್ಥ ಟ್ರಸ್ಟ,
ಓಂಕಾರ ಮಠ, ಕೋಟೆ, ಹರಿಹರ-೫೭೭೬೦೧