ಆತ್ಮೀಯ ಗುರುಭಕ್ತರೆ,

‘ ಶ್ರೀಮಠ ’ ದಲ್ಲಿ  ದಿನಾಂಕ ೧೯-೧೧-೧೬ ರಂದು, ಪ.ಪೂ. ಸ್ವಾಮಿ ಶ್ರೀ ಶಿವಾನಂದತೀರ್ಥರ ೬೮ನೇ ಆರಾಧನ ಮಹೋತ್ಸವ ನೆರವೇರಿತು. ಪ್ರಯುಕ್ತ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ದಿನಾಂಕ ೧೭-೧೧-೧೬ ರಂದು ಗಂಗಾನಯನ ಪೂಜೆ, ಗುರುದೇವತಾ ವಂದನ, ಗಣಪತಿ ಪೂಜೆ ಮತ್ತು ಮಹಾನ್ಯಾಸಪೂರ್ವಕ ರುದ್ರಾಭಿಷೇಕ  ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ , ಗುರುಭಕ್ತರು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ ಪಾಲ್ಗೊಂಡರು.  
ಅನೇಕ ಪಾರಾಯಣಗಳು ಪ್ರಾರಂಭವಾದವು. ಋತ್ವಿಜರಿಂದ ಧಾತ್ರಿ ಹವನವು ನೆರವೇರಿತು.

ದಿನಾಂಕ ೧೫ ಮತ್ತು ೧೬ರ ಸಾಯಂಕಾಲ ‘ ಸಂಗೀತ – ಉಪನ್ಯಾಸ ‘ ಎಂಬ ವಿನೂತನ ಕಾರ್ಯಕ್ರಮದಲ್ಲಿ, ನಾಡಿನ ಪ್ರಸಿದ್ಧ ವಾಗ್ಮಿಗಳಾದ ಶ್ರೀ ಹಿರೇಮಗಳೂರು ಕಣ್ಣನ್ ರವರ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ನಮ್ಮ ದೈನಂದಿನ ಜೀವನದಲ್ಲಿ ಸಂಸ್ಕೃತಿ, ಸಾಹಿತ್ಯ, ಸಂಗೀತ, ದೇಶಭಕ್ತಿ ಮತ್ತು ಧರ್ಮದ ಮಹತ್ವ ಮತ್ತು ಆಚರಣೆಗಳ ಕುರಿತು ಪ್ರವಚನ ನೀಡಿದರು. ಇದಕ್ಕೆ ಪೂರಕವಾಗಿ ಹಲವಾರು ಗೀತೆಗಳನ್ನು, ಗಾಯಕಿ ಶ್ರೀಮತಿ ರೇಖಾರವರುಸುಮಧುರವಾಗಿ ಹಾಡಿದರು.  ಸ್ಥಳೀಯ ಕಲಾವಿದರ ಸಹಯೋಗದೊಂದಿಗೆ  ಕಾರ್ಯಕ್ರಮ ಯಶಸ್ವಿಯಾಯಿತು.

ದಿನಾಂಕ ೧೭-೧೧-೧೬ ರಂದು ‘ ಶ್ರೀಮಠ ‘ದಲ್ಲಿ ಸಾಮೂಹಿಕ ಗುರು ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅನೇಕ ಗುರುಭಕ್ತರು ಭಜನೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿ, ಗುರುದೇವರ ಕೃಪೆಗೆ ಪಾತ್ರರಾದರು.


ದಿನಾಂಕ ೧೮-೧೧-೧೬ರ ಸಂಜೆ, ನಟರಾಜ ನೃತ್ಯಶಾಲಾ ವತಿಯಿಂದ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸುಮಾರು ೨೫ ಬಾಲಕ-ಬಾಲಕಿಯರ ವೃಂದವು ಅನೇಕ ನೃತ್ಯ ಪ್ರಕಾರಗಳನ್ನು ಪ್ರದರ್ಶಸಿದರು.


ದಿನಾಂಕ ೧೯-೧೧-೧೬ರಂದು, ಶ್ರೀಗುರುಗಳ ಆರಾಧನಾ ಮಹೋತ್ಸವ ಪ್ರಯುಕ್ತ ಅನೇಕ ಧಾರ್ಮಿಕ ಆಚರಣೆಗಳನ್ನು ಋತ್ವಿಜರು ನೆರವೇರಿಸಿದರು. ಭಕ್ತಾದಿಗಳು ಶ್ರದ್ಧಾಭಕ್ತಿಗಳಿಂದ ಪಾಲ್ಗೊಂಡು, ಅದ್ವೈತ ಪರಂಪರೆಯ ಸದ್ಗುರುಗಳ ಮತ್ತು ಶ್ರೀಗುರುಗಳ ಕೃಪೆಗೆ ಪಾತ್ರರಾದರು. 
ಬೆಂಗಳೂರು, ಮೈಸೂರು, ಮಂಗಳೂರು, ರಾಣೆಬೆನ್ನೂರು, ದಾವಣಗೆರೆ, ಶಿವಮೊಗ್ಗ ಮತ್ತು ಹರಿಹರದ ಅನೇಕ ಕಡೆಗಳಿಂದ ಆಗಮಿಸಿದ ಗುರುಭಕ್ತರು, ಗುರುಸೇವೆಯನ್ನು ನೆರವೇರಿಸಿದರು. ನಂತರ ತೀರ್ಥಪ್ರಸಾದ ವಿನಿಯೋಗವಾಯಿತು.
ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದರು. 

Please click on the photo below to view all images!
Image01