॥ ಓಂ ಕೇವಲ ॥
ಆತ್ಮೀಯ ಗುರುಭಕ್ತರೆ,
ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಶುಭಾಶಯಗಳು. ಶ್ರೀಮಠ ದಲ್ಲಿ ವಿಶೇಷ ಪೂಜೆ- ಸೇವೆಗಳು ಮತ್ತು ಹಲವಾರು ಕಾರ್ಯಕ್ರಮಗಳು ಕಳೆದ ಮಾಸದಲ್ಲಿ ಜರುಗಿದವು.
ಹರಿಹರಪುರ ಕ್ಷೇತ್ರದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮಿಗಳು, ದಿನಾಂಕ 22-07-15 ರಂದು ಶ್ರೀಮಠಕ್ಕೆ ಆಗಮಿಸಿದರು. ಸಂಧ್ಯಾಕಾಲದ ಪೂಜೆ ಮತ್ತು
ದಿನಾಂಕ 31-07-15 ಶುಕ್ರವಾರ, ಗುರು ಪೂರ್ಣಿಮೆಯಂದು ಶ್ರೀಮಠದಲ್ಲಿ ಸಾಮೂಹಿಕ ಭಜನ ಕಾರ್ಯಕ್ರಮವು ನಡೆಯಿತು. ಸಂಜೆ 6 ಗಂಟೆಗೆ ಪ್ರಾರಂಭವಾಗಿ ರಾತ್ರಿ 8.30ರ ವರೆಗೆ ಸ್ವಾಮಿ ಶ್ರೀ ಶಿವಾನಂದ ತೀರ್ಥರ ಮತ್ತು ಶ್ರೀ ಶಂಕರಲಿಂಗ ಭಗವಾನರ ಭಜನೆಗಳನ್ನು ಶ್ರದ್ಧಾಭಕ್ತಿಗಳಿಂದ ಹಾಡಿದರು. ಮಹಾಪೂಜೆಯ ನಂತರ ಮಹಾಪ್ರಸಾದ ಸಂತರ್ಪಣೆಯಾಯಿತು. ಹಲವಾರು ಪ್ರದೇಶಗಳಿಂದ ಬಂದ ಭಕ್ತರು, ಗುರುಪರಂಪರೆ ಬಗ್ಗೆ ಭಕ್ತಿಭಾವ ಹೊಂದಿದ್ದು ಶ್ರೀಮಠದ ಆಧ್ಯಾತ್ಮಿಕ ಶಕ್ತಿಯ ಪ್ರತೀಕವಾಗಿದೆ.
ಆಗಸ್ಟ್ 28 ಮತ್ತು 29 ರಂದು ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಶ್ರೀಮಠದಲ್ಲಿ ಋಗ್ವೇದಿಯ ಮತ್ತು ಯಜುರ್ವೇದಿಯ ಉಪಾಕರ್ಮಏರ್ಪಡಿಸಲಾಗಿತ್ತು.
ಶ್ರೀಮಠದಲ್ಲಿ ಪ್ರತಿ ಗುರುವಾರದಂದು ಭಜನೆ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ. ಕಾರಣ ಎಲ್ಲ ಗುರುಭಕ್ತರು ಭಾಗವಹಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪ್ರಾರ್ಥನೆ.
ಶುಭ ಹಾರೈಕೆಗಳೊಂದಿಗೆ,
ಕಾರ್ಯದರ್ಶಿಗಳು,
ಸ್ವಾಮಿ ಶ್ರೀ ಶಿವಾನಂದ ತೀರ್ಥ ಟ್ರಸ್ಟ್,
ಓಂಕಾರಮಠ, ಕೋಟೆ, ಹರಿಹರ-೫೭೭೬೦೧